ದಿವ್ಯಾಂಕ ತ್ರಿಪಾಠಿ ದಹಿಯಾ (ಜನನ:೧೪ ಡಿಸೆಂಬರ್ ೧೯೮೪), ಹಿಂದಿ ದೂರದರ್ಶನ ಉದ್ಯಮದಲ್ಲಿ ಕೆಲಸ ಮಾಡುವ ಭಾರತೀಯ ನಟಿ. ಝೀ ಟಿವಿಯ ಬನೂ ಮೇ ತೇರಿ ದುಲ್ಹನ್ ಧಾರವಾಹಿಯಲ್ಲಿ ದ್ವಿಪಾತ್ರದಲ್ಲಿ ನಟಿಸುವ ಮೂಲಕ ಇವರು ಖ್ಯಾತಿ ಪಡೆದರು. ಇವರು ಸ್ಟಾರ್ ಪ್ಲಸ್‌ನ ಯೆ ಹೈ ಮೊಹಬತೇ ಧಾರವಾಹಿಯಲ್ಲಿ ಡಾ. ಇಶಿತಾ ಭಲ್ಲಾ ಪಾತ್ರದಲ್ಲಿ ನಟಿಸುವ ಮೂಲಕ ಇನ್ನೂ ಖ್ಯಾತಿ ಪಡೆದರು. ೨೦೧೭ ರಲ್ಲಿ, ಇವರು ಡಾನ್ಸ್ ರಿಯಾಲಿಟಿ ಶೋ ನಚ್ ಬಲಿಯೆಯಲ್ಲಿ ವಿಜೇತರಾದರು. == ಆರಂಭಿಕ ಜೀವನ == ತ್ರಿಪಾಠಿ ಡಿಸೆಂಬರ್ ೧೪,೧೯೮೪ ರಂದು ಮಧ್ಯಪ್ರದೇಶದ ಭೋಪಾಲ್ ನಲ್ಲಿ ಜನಿಸಿದರು. ಇವರು ಭೋಪಾಲ್‌ನ ನೂತನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು ಹಾಗೂ ಉತ್ತರಕಾಶಿಯ ನೆಹರು ಇನ್ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ ನಿಂದ ಪರ್ವತಾರೋಹಣ ಕೋರ್ಸ್ ಅನ್ನು ಪೂರ್ಣಗೊಳಿಸಿದರು. == ವೃತ್ತಿ == ತ್ರಿಪಾಠಿ ಇವರು ಭೋಪಾಲ್‌ನ ಆಲ್ ಇಂಡಿಯಾ ರೇಡಿಯೋದಲ್ಲಿ ನಿರೂಪಕಿಯಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇವರು ೨೦೦೩ ರಲ್ಲಿ ಪ್ಯಾಂಟೀನ್ ಝೀ ಟೀನ್ ಕ್ವೀನ್ ನಲ್ಲಿ ಭಾಗವಹಿಸಿದರು ಮತ್ತು ಮಿಸ್ ಬ್ಯೂಟಿಫುಲ್ ಸ್ಕಿನ್ ಪ್ರಶಸ್ತಿಯನ್ನು ಗೆದ್ದರು. ೨೦೦೪ ರಲ್ಲಿ, ತ್ರಿಪಾಠಿ ಭಾರತದ ಅತ್ಯುತ್ತಮ ಸಿನೆಸ್ಟಾರ್ಸ್ ಕಿ ಖೋಜ್ ನಲ್ಲಿ ಭಾಗವಹಿಸಿದರು ಮತ್ತು ಭೋಪಾಲ್ ವಲಯದಿಂದ ಅಗ್ರ ೮ ರಲ್ಲಿ ಸ್ಥಾನ ಪಡೆದರು. ಅವರು ಮತ್ತೆ ಇಂದೋರ್ ವಲಯದಿಂದ ಸ್ಪರ್ಧಿಸಿದರು, ಅಲ್ಲಿ ಅವರನ್ನು ರನ್ನರ್ ಅಪ್ ಎಂದು ಘೋಷಿಸಲಾಯಿತು. == ಚಲನಚಿತ್ರಗಳ ಪಟ್ಟಿ == == ವೆಬ್ == == ಟೆಲಿವಿಷನ್ == == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == == ಗ್ಯಾಲರಿ == == ಉಲ್ಲೇಖಗಳು ==